“ನಾನು ಸರಿಯಾಗಿ ತಿನ್ನುತ್ತೇನೆ, ಕೆಲಸಕ್ಕೆ ಹೋಗುತ್ತೇನೆ, ಮನೆ ನೋಡಿಕೊಳ್ಳುತ್ತೇನೆ… ಇನ್ನೇನು ಸಮಸ್ಯೆ?”
ಇದು ನಮ್ಮಲ್ಲಿ ಬಹುತೇಕ ಜನರ ಮನಸ್ಸಿನಲ್ಲಿ ಇರುವ ಪ್ರಶ್ನೆ.
ಆದರೆ ನಿಜವಾದ ಸಮಸ್ಯೆ ಏನೆಂದರೆ — ರೋಗಗಳು ಒಂದೇ ದಿನದಲ್ಲಿ ಬರಲ್ಲ.
ಅವು ನಮ್ಮ ದಿನನಿತ್ಯದ ಸಣ್ಣ ಸಣ್ಣ ತಪ್ಪು ಅಭ್ಯಾಸಗಳಿಂದ ನಿಧಾನವಾಗಿ ಬೆಳೆಯುತ್ತವೆ.
ನನ್ನ ಅನುಭವದಿಂದ ಹೇಳುತ್ತೇನೆ — ಆಸ್ಪತ್ರೆ ತಲುಪುವಷ್ಟರಲ್ಲಿ ಜನರು ಹೇಳೋ ಮಾತು ಒಂದೇ:
“ಇದು ಇಷ್ಟು ದೊಡ್ಡ ಸಮಸ್ಯೆ ಆಗುತ್ತದೆ ಅಂತ ಗೊತ್ತಿರಲಿಲ್ಲ!”
ಈಗ ನೋಡೋಣ, ನಾವು ಪ್ರತಿದಿನ ಗೊತ್ತಿಲ್ಲದೇ ಮಾಡುತ್ತಿರುವ 7 ಅಪಾಯಕಾರಿ ಅಭ್ಯಾಸಗಳು ಯಾವುವು ಅಂತ
1️⃣ ನಿದ್ರೆಯನ್ನು ನಿರ್ಲಕ್ಷ್ಯ ಮಾಡುವುದು (Less Sleep)
“ನಾಳೆ ಕೆಲಸ ಇದೆ”, “ಇನ್ನೊಂದು episode ನೋಡಿ ಮಲಗ್ತೀನಿ”
ಇದು ಸಾಮಾನ್ಯ ಮಾತು.
ಆದರೆ:
*ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ
*ರಾತ್ರಿ 12 ನಂತರ ಮಲಗುವ ಅಭ್ಯಾಸ
ಇವು:
*BP, Diabetes
*ಮೆದುಳು ದಣಿವು
*ಮನಸ್ಸಿನ ಒತ್ತಡ
*ತೂಕ ಹೆಚ್ಚಳ
ದೇಹ repair ಆಗೋ ಸಮಯ ನಿದ್ರೆ. ಅದನ್ನು ಕತ್ತರಿಸಿದರೆ, ದೇಹವೇ ಕುಸಿಯುತ್ತದೆ.
2️⃣ ನೀರು ಕಡಿಮೆ ಕುಡಿಯುವುದು
“ನನಗೆ ದಾಹ ಆಗಲ್ಲ” ಅಂತ ಹೇಳೋರು ಹೆಚ್ಚು.
ಆದರೆ ನೀರು ಕಡಿಮೆ ಕುಡಿದರೆ:
*ಕಿಡ್ನಿ ಸಮಸ್ಯೆ
* infection
*ತಲೆನೋವು
*ಚರ್ಮ ಒಣಗುವುದು
*ಸುಸ್ತು
ದಿನಕ್ಕೆ 2.5 – 3 ಲೀಟರ್ ನೀರು ಕುಡಿಯುವುದು ಐಷಾರಾಮಿ ಅಲ್ಲ, ಅಗತ್ಯ.
3️⃣ ಊಟ ಬಿಟ್ಟುಬಿಡುವುದು / ಸಮಯ ತಪ್ಪಿಸುವುದು
*ಬೆಳಿಗ್ಗಿನ ಉಪಹಾರ ತಿನ್ನದೆ ಇರುವುದು
*ಮಧ್ಯಾಹ್ನ ತಡವಾಗಿ ಊಟ
*ರಾತ್ರಿ ರ ಭಾರೀ ಭೋಜನ
ಇದರ ಪರಿಣಾಮ:
*Gastritis
*Acidity
*Low sugar episodes
*Hormonal imbalance
ದೇಹಕ್ಕೆ ಸಮಯ ಪಾಲನೆ ಬಹಳ ಮುಖ್ಯ.
4️⃣ ಹೆಚ್ಚು ಮೊಬೈಲ್ ಮತ್ತು ಸ್ಕ್ರೀನ್ ಬಳಕೆ
*ನಿದ್ರೆಗೆ ಮೊದಲು ಮೊಬೈಲ್
*ಎದ್ದ ತಕ್ಷಣ ಮೊಬೈಲ್
*ಕೆಲಸದ ನಡುವೆ ಮೊಬೈಲ್
ಪರಿಣಾಮ:
*ಕಣ್ಣು ನೋವು
*ತಲೆನೋವು
*ನಿದ್ರೆ ಸಮಸ್ಯೆ
*Anxiety, irritability
*ರಾತ್ರಿ ಮಲಗುವ ಮುನ್ನ ಕನಿಷ್ಠ 1 ಗಂಟೆ ಮೊಬೈಲ್ ದೂರ ಇಡಿ.
5️⃣ ವ್ಯಾಯಾಮ ಇಲ್ಲದ ಜೀವನ (Sedentary Lifestyle)
“ನನಗೆ ಸಮಯ ಇಲ್ಲ” ಅನ್ನೋದು ಸಾಮಾನ್ಯ excuse.
ಆದರೆ:
*ದಿನವಿಡೀ ಕುಳಿತ ಕೆಲಸ
ಇವು:
*ತೂಕ ಹೆಚ್ಚಳ
*ಕೀಲು ನೋವು
*ಹೃದಯ ಸಮಸ್ಯೆ
*ಸಕ್ಕರೆ ಖಾಯಿಲೆ
*ರಕ್ತದ ಒತ್ತಡ
*ದಿನಕ್ಕೆ 30 ನಿಮಿಷ ನಡೆಯುವುದು ಕೂಡ ಸಾಕು.
6️⃣ ಒತ್ತಡವನ್ನು ಒಳಗೇ ಇಟ್ಟುಕೊಳ್ಳುವುದು
“ನಾನು strong”
“ಇದು ನನ್ನ problem”
ಆದರೆ:
ಮನಸ್ಸಿನ ಒತ್ತಡ ದೇಹಕ್ಕೆ ರೋಗ ತರುತ್ತದೆ
*ರಕ್ತದ ಒತ್ತಡ
*ಹೃದಯ ಸಮಸ್ಯೆ
*ನಿದ್ರಾ ಹೀನತೆ
*ಖಿನ್ನತೆ
ಮಾತಾಡಿ, ಬರೆಯಿರಿ, ಸಹಾಯ ಕೇಳಿ.
ಒತ್ತಡ weakness ಅಲ್ಲ.
7️⃣ ದೇಹದ ಸೂಚನೆಗಳನ್ನು ನಿರ್ಲಕ್ಷ್ಯ ಮಾಡುವುದು
*ಮರುಮರು:ತಲೆನೋವು
*ಸುಸ್ತು
*ಉಸಿರಾಟ ತೊಂದರೆ
*ಎದೆಯ ಅಸ್ವಸ್ಥತೆ
ಇವುಗಳನ್ನು ನಿರ್ಲಕ್ಷಿಸುವುದು ಅತಿ ದೊಡ್ಡ ತಪ್ಪು.
ದೇಹ ಮೊದಲು ಸೂಚನೆ ಕೊಡುತ್ತದೆ,
ನಂತರ ಮಾತ್ರ ರೋಗ ಬರುತ್ತದೆ.
ಹೇಗೆ ಈ ಅಭ್ಯಾಸಗಳನ್ನು ಬದಲಿಸಿಕೊಳ್ಳಬಹುದು?
*ಸಮಯಕ್ಕೆ ಮಲಗುವುದು – ಎದ್ದೇಳುವುದು
*ನೀರು bottle ಜೊತೆ ಇಡಿ
*ಮೊಬೈಲ್ ಮಿತಿಯಾಗಿ ಬಳಕೆ ಮಾಡಿ
* ದಿನಕ್ಕೆ 30 ನಿಮಿಷ ನಡಿಗೆ
*ವಾರಕ್ಕೊಮ್ಮೆ ನಿಮ್ಮ ದೇಹವನ್ನು ಗಮನಿಸಿ
* ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಕೊನೆಯ ಮಾತು
ಇಂದೇ ಒಂದು ಅಭ್ಯಾಸ ಬದಲಿಸಿದರೆ —
ನಾಳೆ ದೊಡ್ಡ ರೋಗವನ್ನು ತಪ್ಪಿಸಬಹುದು.