PCOS ಮತ್ತು PCOD — ಯುವತಿಯರು ತಿಳಿದುಕೊಳ್ಳಲೇಬೇಕಾದ ಪ್ರಮುಖ ಮಾಹಿತಿ
ಇಂದಿನ ಕಾಲದಲ್ಲಿ ಬಹಳಷ್ಟು ಯುವತಿಯರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯಗಳಲ್ಲಿ PCOS (Polycystic Ovary Syndrome) ಮತ್ತು PCOD (Polycystic Ovarian Disease) ಪ್ರಮುಖವಾಗಿವೆ.
ಅನಿಯಮಿತ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ ಬದಲಾವಣೆ, ವ್ಯಾಯಾಮದ ಕೊರತೆ ಇವುಗಳ ಪರಿಣಾಮವಾಗಿ ಈ ಸಮಸ್ಯೆಗಳು ಹೆಚ್ಚುತ್ತಿವೆ.
ಸರಿಯಾದ ಸಮಯದಲ್ಲಿ ತಿಳಿದುಕೊಂಡರೆ ಇದನ್ನು ನಿಯಂತ್ರಿಸಬಹುದು. ಆದರೆ ಲಕ್ಷಣಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಗರ್ಭಧಾರಣೆ ಸಮಸ್ಯೆ, ಮಧುಮೇಹ, ಹಾರ್ಮೋನ್ ಅಸಮತೋಲನ ಮೊದಲಾದ ಸಮಸ್ಯೆಗಳು ಉಂಟಾಗಬಹುದು.
PCOS ಮತ್ತು PCOD ಎಂದರೇನು?
PCOD (Polycystic Ovarian Disease)
ಈ ಸ್ಥಿತಿಯಲ್ಲಿ ಅಂಡಾಶಯದಲ್ಲಿ ಸಣ್ಣ ಸಣ್ಣ ನೀರಿನ ಗುಳ್ಳೆ ಗಳು ಉಂಟಾಗುತ್ತವೆ. ಹಾರ್ಮೋನ್ ಅಸಮತೋಲನದಿಂದ ಅಂಡೋತ್ಪತ್ತಿ ಸರಿಯಾಗಿ ಆಗುವುದಿಲ್ಲ.
PCOS (Polycystic Ovary Syndrome)
ಇದು ಹೆಚ್ಚು ಗಂಭೀರ ಸ್ಥಿತಿ. ದೇಹದಲ್ಲಿ ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹಲವು ದೇಹ ಮತ್ತು ಮನಸ್ಸಿನ ಸಮಸ್ಯೆಗಳು ಉಂಟಾಗುತ್ತವೆ.
ಸರಳವಾಗಿ ಹೇಳುವುದಾದರೆ:
PCOD = ಸ್ವಲ್ಪ ಕಡಿಮೆ ಗಂಭೀರ.
PCOS = ಹೆಚ್ಚು ಪರಿಣಾಮ ಬೀರುವ ಸ್ಥಿತಿ.
ಯುವತಿಯರಲ್ಲಿ ಇದು ಏಕೆ ಹೆಚ್ಚಾಗಿದೆ?
✔ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್
✔ ವ್ಯಾಯಾಮದ ಕೊರತೆ
✔ ಅಧಿಕ ಮೊಬೈಲ್ / ಜಡ ಜೀವನಶೈಲಿ
✔ ಒತ್ತಡ ಮತ್ತು ನಿದ್ರೆ ಕೊರತೆ
✔ ತೂಕ ಹೆಚ್ಚಳ
✔ ಕುಟುಂಬದಲ್ಲಿ ಇತಿಹಾಸ
PCOS/PCOD ಲಕ್ಷಣಗಳು — ಹೇಗೆ ಗುರುತಿಸಬಹುದು?
ಯುವತಿಯರು ಗಮನಿಸಬೇಕಾದ ಮುಖ್ಯ ಲಕ್ಷಣಗಳು
1. ಮಾಸಿಕ ಮುಟ್ಟು
*ಅನಿಯಮಿತವಾಗುವುದು.
*ತಿಂಗಳು ತಿಂಗಳಿಗೆ ಬರದೆ ಇರಬಹುದು.
*ಹೆಚ್ಚು ದಿನಗಳ ಬಳಿಕ ಬರಬಹುದು.
*ಹೆಚ್ಚು ಅಥವಾ ಕಡಿಮೆ ರಕ್ತಸ್ರಾವ.
ಇದರ ಪ್ರಮುಖ ಲಕ್ಷಣ
2. ತೂಕ ಹೆಚ್ಚಾಗುವುದು
ವಿಶೇಷವಾಗಿ ಹೊಟ್ಟೆ ಭಾಗದಲ್ಲಿ ,ಕೊಬ್ಬಿನ ಅಂಶ ಆಹಾರ ಇಲ್ಲದೆ ಕೂಡ ತೂಕ
ಹೆಚ್ಚಳ.
3. ಮುಖದಲ್ಲಿ ಮೊಡವೆ
ತುಂಬಾ ಹೆಚ್ಚು ಮೊಡವೆ,ಎಣ್ಣೆಯುಕ್ತ ಚರ್ಮ
4. ಅನಗತ್ಯ ಕೂದಲು ಬೆಳವಣಿಗೆ
ಮುಖ, ತುಟಿ, ಗಡ್ಡ ಭಾಗ
ಹೊಟ್ಟೆ ಅಥವಾ ಎದೆ ಭಾಗ
ಇದನ್ನು ಹಿರುಸ್ತೀಸಮ್ ಎಂದು ಕರೆಯುತ್ತಾರೆ.
5. ಕೂದಲು ಉದುರುವುದು
ತಲೆಯ ಮುಂದೆ ಕೂದಲು ಕಡಿಮೆಯಾಗುವುದು.
6. ನಿದ್ರೆ ಸಮಸ್ಯೆ ಮತ್ತು ದೌರ್ಬಲ್ಯ
ಯಾವಾಗಲೂ ಆಯಾಸದ ಭಾವನೆ,
ಏಕಗ್ರತೆ ಕಡಿಮೆ.
7. ಮನೋಭಾವ ಬದಲಾವಣೆ
*ಚಡಪಡಿಕೆ.
*ಆತಂಕ
*ಖಿನ್ನತೆ ಲಕ್ಷಣಗಳು
PCOS/PCOD ಮತ್ತು ಹಾರ್ಮೋನ್ ಅಸಮತೋಲನ — ಒಳಗೆ ಏನಾಗುತ್ತಿದೆ?
ನಮ್ಮ ದೇಹದಲ್ಲಿ ಹಲವು ಹಾರ್ಮೋನ್‌ಗಳು ಒಂದರೊಂದಿಗೆ ಒಂದು ಸಮತೋಲನದಲ್ಲಿ ಕೆಲಸ ಮಾಡುತ್ತವೆ. PCOS/PCOD ಇರುವ ಯುವತಿಯರಲ್ಲಿ ಈ ಸಮತೋಲನ ಕೆಡುತ್ತದೆ.
ಮುಖ್ಯವಾಗಿ:
✔ ಇನ್ಸುಲಿನ್ ಹೆಚ್ಚಾಗುವುದು
✔ ಪುರುಷ ಹಾರ್ಮೋನ್ ಹೆಚ್ಚಾಗುವುದು✔ ಅಂಡೋತ್ಪತ್ತಿ ಸರಿಯಾಗಿ ನಡೆಯದಿರುವುದು
ಇದರಿಂದ ಅಂಡೋತ್ಪಾತಿ ಆಗದೆ ಅಂಡಾಶಯ ದಲ್ಲಿ ಚೀಲ ರೂಪದಲ್ಲಿ ಉಳಿಯಬಹುದು.
ಇನ್ಸುಲಿನ್ ರೆಸಿಸ್ಟನ್ಸ್ — ಮುಖ್ಯ ಕಾರಣ
ಬಹಳಷ್ಟು PCOS ಯುವತಿಯರಲ್ಲಿ ಕಂಡುಬರುವ ಪ್ರಮುಖ ಸಮಸ್ಯೆ ಇದು.
ದೇಹದಲ್ಲಿ ಇನ್ಸುಲಿನ್ ಇದ್ದರೂ ಜೀವಕೋಶ ಅದನ್ನು ಸರಿಯಾಗಿ ಬಳಸುವುದಿಲ್ಲ. ಇದರಿಂದ:
❌ ರಕ್ತದಲ್ಲಿ ಸಕ್ಕರೆ ಹೆಚ್ಚಾಗುತ್ತದೆ
❌ ತೂಕ ಹೆಚ್ಚಾಗುತ್ತದೆ
❌ ಹಾರ್ಮೋನ್ ಅಸಮತೋಲನ ಹೆಚ್ಚಾಗುತ್ತದೆ
ಆದ್ದರಿಂದ PCOS ಇರುವವರಿಗೆ ಮಧುಮೇಹದ ಅಪಾಯ ಹೆಚ್ಚು.
ಹೇಗೆ ದೃಢಪಡಿಸಬಹುದು?
PCOS/PCOD ಇದೆ ಎಂದು ಅನುಮಾನ ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
ಪರೀಕ್ಷೆಗಳು
✔ ಅಲ್ಟ್ರಾಸೌಂಡ್ ಸ್ಕ್ಯಾನ್.
✔ ರಕ್ತದ ಪರೀಕ್ಷೆ (ಹಾರ್ಮೋನ್ )
✔ ಥೈರಾಯಿಡ್ ಪರೀಕ್ಷೆ.
✔ ಬ್ಲಡ್ ಶುಗರ್ ಟೇಸ್ಟ್.
ಸ್ವಯಂ ಔಷಧಿ ತೆಗೆದುಕೊಳ್ಳಬಾರದು ❌
ಚಿಕಿತ್ಸೆ ಮಾಡಿಸದಿದ್ದರೆ ಏನು ಆಗಬಹುದು?
ಸಮಯಕ್ಕೆ ಚಿಕಿತ್ಸೆ ಮಾಡಿಸದಿದ್ದರೆ ಮುಂದಿನ ಸಮಸ್ಯೆಗಳು ಉಂಟಾಗಬಹುದು:
❌ ಗರ್ಭಧಾರಣೆ ಸಮಸ್ಯೆ
❌ ಮಧುಮೇಹ
❌ ರಕ್ತದೊತ್ತಡ
❌ ಹೃದಯ ರೋಗ
❌ ಎಂಡೊಮೆಟ್ರಯಲ್ ಸಮಸ್ಯೆಗಳು
❌ ಮಾನಸಿಕ ಒತ್ತಡ
ಯುವತಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
1. ಆರೋಗ್ಯಕರ ಆಹಾರ ಪದ್ಧತಿ
✔ ಹೆಚ್ಚು ತರಕಾರಿ ಮತ್ತು ಹಣ್ಣು
✔ ಸಂಪೂರ್ಣ ಧಾನ್ಯಗಳು
✔ ಪ್ರೋಟೀನ್ ಆಹಾರ
✔ ಕಡಿಮೆ ಸಕ್ಕರೆ
❌ ತಪ್ಪಿಸ ಬೇಕಾದ ಆಹಾರ :
*ಜಂಕ್ ಫುಡ್
*ಸಾಫ್ಟ್ ಡ್ರಿಂಕ್ಸ್
*ಪ್ಯಾಕೇಜ್ಡ್ ಸ್ನ್ಯಾಕ್ಸ್
*ಹೆಚ್ಚು ಮಿಠಾಯಿ
2. ನಿಯಮಿತ ವ್ಯಾಯಾಮ
*ಪ್ರತಿ ದಿನ ಕನಿಷ್ಠ 30 ನಿಮಿಷ ವ್ಯಾಯಾಮ ಅಗತ್ಯ.
✔ ನಡಿಗೆ
✔ ಯೋಗ
✔ ಸೈಕಲಿಂಗ್
✔ ಸ್ಕಿಪಿಂಗ್
ತೂಕ ನಿಯಂತ್ರಣ ಬಹಳ ಮುಖ್ಯ.
3. ಒತ್ತಡ ನಿಯಂತ್ರಣೆ
ಸ್ಟ್ರೆಸ್ ಹಾರ್ಮೋನ್ ಕೂಡ ಸಮಸ್ಯೆ ಹೆಚ್ಚಿಸುತ್ತವೆ.
✔ ಮಧ್ಯಾನ
✔ ಆಳವಾದ ಉಸಿರಾಟ
✔ಬಿಡುವಿನ ವೇಳೆಯ ಚಟುವಟಿಕೆಗಳು
✔ ಪ್ರಕೃತಿಯೊಂದಿಗೆ ಸಮಯ.
4. ಉತ್ತಮ ನಿದ್ರೆ
ದಿನಕ್ಕೆ 7–8 ಗಂಟೆ ನಿದ್ರೆ
ತಡರಾತ್ರಿ ಮೊಬೈಲ್ ಬಳಕೆ ಕಡಿತಗೊಳಿಸಿ.
5. ನಿಯಮಿತ ವೈದ್ಯಕೀಯ ಪರೀಕ್ಷೆ
ಅಸಹಜ ಮುಟ್ಟು ಇದ್ದರೆ ನಿರ್ಲಕ್ಷಿಸಬೇಡಿ.
ತೂಕ ಕಡಿಮೆ ಮಾಡಿದರೆ ಏನು ಲಾಭ?
ಕೇವಲ 5–10% ತೂಕ ಕಡಿಮೆಯಾದರೂ:
* ತಿಂಗಳ ಮುಟ್ಟಿನ ಅಸಮತೋಲನವನ್ನು ತಡೆಯಬಹುದು.
*ಬಂಜೆತನ ಸುಧಾರಿಸುತ್ತದೆ
* ಮೊಡವೆ ಕಡಿಮೆಯಾಗುತ್ತದೆ
* ಶಕ್ತಿ ಹೆಚ್ಚುತ್ತದೆ
* ಸಕ್ಕರೆ ಖಾಯಿಲೆಯ ಅಪಾಯ ಕಡಿಮೆಯಾಗುತ್ತದೆ.
ಯೋಗ ಮತ್ತು ನೈಸರ್ಗಿಕ ವಿಧಾನಗಳು
ತಡೆಯುವಲ್ಲಿ ಯೋಗ ತುಂಬಾ ಸಹಾಯಕ.
ಉಪಯುಕ್ತ ಯೋಗಾಸನಗಳು:
* ಭುಜಂಗಾಸನ
* ಸುಪ್ತ ಬದ್ದಕೋಣಾಸನ
* ಮಲಾಸನ
* ಪ್ರಾಣಾಯಾಮ
ಒತ್ತಡ ಕಡಿಮೆ ಮಾಡುವುದರಿಂದ ಹಾರ್ಮೋನ್ ಸಮಾತೋಲನ ಆಗಲು ಸಹಾಯ ಮಾಡುತ್ತದೆ.
ವಿದ್ಯಾರ್ಥಿನಿಯರಲ್ಲಿ ಕಾಣುವ ಸಮಸ್ಯೆಗಳು
ಕಾಲೇಜು / ಶಾಲಾ ಹುಡುಗಿಯರಲ್ಲಿ :
*ತಡ ರಾತ್ರಿ ಓದು ಅಥವಾ ಮೊಬೈಲ್ ಬಳಕೆ.
* ಹಾಸ್ಟೆಲ್ ಆಹಾರ ಹವ್ಯಾಸ
* ಪರೀಕ್ಷಾ ಒತ್ತಡ.
*ನಿದ್ರಾಹೀನತೆ
ಇವು PCOS ಅನ್ನು ಪ್ರಚೋದನೆ ಮಾಡಬಹುದು.
PCOS/PCOD ಇದ್ದರೆ ಜೀವನ ನಿಲ್ಲುವುದಿಲ್ಲ
ಬಹಳಷ್ಟು ಯುವತಿಯರು ಭಯಪಡುತ್ತಾರೆ. ಆದರೆ ಇದು ನಿಯಂತ್ರಣಕ್ಕೆ ಬರುವಂತಹ ಸಮಸ್ಯೆಯಾಗಿದೆ .
✔ ಸರಿಯಾದ ಜೀವನ ಶೈಲಿ
✔ ವೈದ್ಯಕೀಯ ಸಲಹೆ
✔ ನಿಯಮಿತ ಅನುಸರಣೆ
ಇವುಗಳಿಂದ ಸಾಮಾನ್ಯ ಜೀವನ ನಡೆಸಬಹುದು.
ಮಾನಸಿಕ ಆರೋಗ್ಯವೂ ಸಮಾನವಾಗಿ ಮುಖ್ಯ
ದೇಹದ ಜೊತೆ ಮನಸ್ಸಿನ ಆರೋಗ್ಯವೂ ಹಾನಿಯಾಗಬಹುದು.
ಯುವತಿಯರು ಅನುಭವಿಸುವ ಭಾವನೆಗಳು:
*“ನನ್ನಲ್ಲಿ ಏನೋ ತಪ್ಪಾಗಿದೆ” ಎಂಬ ಭಾವನೆ
*ಆತ್ಮವಿಶ್ವಾಸ ಕಡಿಮೆಯಾಗುವುದು
ಸಾಮಾಜಿಕ ಪ್ರತ್ಯೇಕತೆ.
ಕುಟುಂಬದ ಬೆಂಬಲ ಅಗತ್ಯ
✔ ಪೋಷಕರು ಬೆಂಬಲ ನೀಡಬೇಕು.
✔ ಬಾಡಿ ಶೇಮಿಂಗ್ ಮಾಡಬಾರದು
✔ ಭಾವನಾತ್ಮಕ ಬೆಂಬಲ ನೀಡಬೇಕು.
ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ಈ ಲಕ್ಷಣಗಳು ಇದ್ದರೆ ತಡ ಮಾಡಬೇಡಿ:
* 3 ತಿಂಗಳಿಗಿಂತ ಹೆಚ್ಚು ಮುಟ್ಟಿನಲ್ಲಿ ಅಸಮಾತೊಲನ
*ಅಚಾನಕ್ಕಾಗಿ ತೂಕ ಹೆಚ್ಚಳ.
* ಅಧಿಕ ಕೂದಲಿನ ಬೆಳವಣಿಗೆ.
* ಬಂಜೆತನ ಕಾಳಜಿಗಳು.
* ಹೆಚ್ಚಾದ ಮೊಡವೆಗಳು.
ಯುವತಿಯರಿಗೆ ಮುಖ್ಯ ಸಂದೇಶ
PCOS/PCOD ಒಂದು ಶಿಕ್ಷೆ ಅಲ್ಲ ❌
ಇದು ಜೀವನ ಶೈಲಿಯ ಅಸ್ವಸ್ಥತೆ.
ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ:
* ಹಾರ್ಮೋನ್ ಬ್ಯಾಲೆನ್ಸ್ ಸಾಧ್ಯ
* ಬಂಜೆತನ ಉಳಿಸಬಹುದು
* ಆರೋಗ್ಯಕರ ಜೀವನ ನಡೆಸಬಹುದು
ಕೊನೆಯ ಮಾತು
ಇಂದಿನ ಯುವತಿಯರು ವೃತ್ತಿ , ಶಿಕ್ಷಣ , ಸಾಮಾಜಿಕ ಒತ್ತಡ ಇವೆಲ್ಲದರ ನಡುವೆ ಆರೋಗ್ಯವನ್ನು ಕಡೆಗಣಿಸುತ್ತಾರೆ. ಆದರೆ ಸಂತಾನೋತ್ಪತ್ತಿ ಆರೋಗ್ಯ ಅತ್ಯಂತ ಪ್ರಮುಖ.
ಮುತ್ತಿನ ಅಸಮತೋಲನ ವನ್ನು “ಸಾಮಾನ್ಯ” ಎಂದು ತೆಗೆದುಕೊಳ್ಳಬೇಡಿ. ದೇಹ ನೀಡುವ ಸೂಚನೆಗಳನ್ನು ಗಮನಿಸಿ. ಬೇಗ ಗುರುತಿಸಿ ಚಿಕಿತ್ಸೆ ಆರಂಭಿಸಿದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳನ್ನು ತಪ್ಪಿಸಬಹುದು.
ಆರೋಗ್ಯಕರ ಜೀವನಶೈಲಿ = ಉತ್ತಮ ಹಾರ್ಮೋನ್ ಸಮತೋಲನ = ಸಂತೋಷಕರ ಜೀವನ.
ಲೇಖನ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.